Voice of Nation
ಪವಿತ್ರ ಗಂಗಾನದಿಯ ಬಗ್ಗೆ ಒಂದಷ್ಟು ಮಾಹಿತಿ.
*ಗಂಗಾ ನದಿಯು ಮೊದಲಿಗೆ ಅಲಕಾನಂದ ಮತ್ತು ಭಗೀರಥ ಎಂಬ ಪ್ರತ್ಯೇಕ ನದಿಗಳಾಗಿ ಗಂಗೋತ್ರಿಯಲ್ಲಿ ಹುಟ್ಟಿ ದೇವ ಪ್ರಯಾಗ ಇಂದಿನ ಉತ್ತರಖಂಡ ಎಂಬಲ್ಲಿ ಸಂಗಮ ಹೊಂದಿ ಗಂಗಾ ನದಿಯಾಗಿ ಪಶ್ಚಿಮ ಮತ್ತು ನೈರುತ್ಯ ದಿಕ್ಕಿನ ಹಿಮಾಲಯ ಪರ್ವತಗಳ ಇಕ್ಕಟ್ಟಾದ ಕಣಿವೆಗಳಲ್ಲಿ ಹರಿಯುತ್ತಾ ಋಷಿಕೇಶದ ನಂತರ ಹಿಮಾಲಯವನ್ನು ಬಿಟ್ಟು ಹರಿದ್ವಾರದ ಬಳಿ ಮೈದಾನವನ್ನು ಪ್ರವೇಶಿಸುತ್ತದೆ.
* ನಂತರ ಉತ್ತರ ಪ್ರದೇಶದ ಅಲಹಾಬಾದ್ ಪ್ರಯಾಗ್ ರಾಜ್ ಬಳಿ ಯಮುನಾ ನದಿಯು ಗಂಗಾ ನದಿಯನ್ನು ಸೇರಿ ಪಶ್ಚಿಮ ಬಂಗಾಳದ ಗಡಿಯುವುದಕ್ಕೂ ಹರಿದು ಬಾಂಗ್ಲಾದೇಶವನ್ನು ಪ್ರವೇಶಿಸಿ ಬಂಗಾಳಕೊಲ್ಲಿಯನ್ನು ಸೇರುತ್ತದೆ ಗಂಗಾ ನದಿಯು 2525 ಕಿಲೋಮೀಟರ್ ಉದ್ದ ಹರಿಯುತ್ತದೆ.
ಗಂಗಾ ನದಿಯ ಎಡಭಾಗದ ಉಪನದಿಗಳು ಯಾವುವು ಅಂತ ನೋಡೋದಾದ್ರೆ ಮಹಾಕಾಳಿ, ಕೋಸಿ, ಕರ್ನಾಲಿ, ಘಾಗ್ರ, ರಾಮಗಂಗಾ.
ಗಂಗಾ ನದಿಯ ಬಲಭಾಗದಲ್ಲಿ ಹರಿಯುವಂತ ಉಪನದಿಗಳು ಮಹಾನಂದಾ, ಯಮುನಾ, ಸೋನಾ
ಗಂಗಾ ನದಿಯ ದಡದಲ್ಲಿರುವ ಪ್ರಮುಖ ನಗರಗಳು : ಹರಿದ್ವಾರ, ಕಾನ್ಪುರ, ಪ್ರಯಾಗ್ ರಾಜ್, ವಾರಣಾಸಿ, ಘಾಜಿಪುರ, ಪಾಟ್ನಾ, ಕೊಲ್ಕತ್ತಾ.
ಗಂಗಾ ನದಿಯು ಹರಿದು ಹೋಗುವಂತಹ ರಾಜ್ಯಗಳು ಯಾವ್ಯಾವು ಅಂತ ನೋಡೋದಾದ್ರೆ ಮೊದಲನೆಯದಾಗಿ ಉತ್ತರಖಂಡ 2. ಉತ್ತರ ಪ್ರದೇಶ, 3. ಬಿಹಾರ್, 4. ಜಾರ್ಖಂಡ್, 5.ಪಶ್ಚಿಮ ಬಂಗಾಳ
ಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವಂತಹ ಅಣೆಕಟ್ಟು ಪಶ್ಚಿಮ ಬಂಗಾಳದಲ್ಲಿ ಇರುವಂತಹ ಪರಕ್ಕಾ ಅಣೆಕಟ್ಟು